ಪ್ಟೆಂಬರ್ ೩೦ಕ್ಕೆ ರಾಜ್‌ಕುಮಾರ ಟೀಸರ್!
Posted date: 29 Thu, Sep 2016 – 11:56:51 AM

ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಸೆಪ್ಟೆಂಬರ್ ಮೂವತ್ತರಂದು ಡಬಲ್ ಸಂಭ್ರಮ. ಅಂದು ದುನಿಯಾ ಸೂರಿ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್‌ನ ಮೂರನೇ ಚಿತ್ರ ‘ದೊಡ್ಮನೆ ಹುಡ್ಗ’ ತೆರೆಗೆ ಬರುತ್ತಿದೆ. ಅದೇ ದಿನ ಪುನೀತ್ ರಾಜ್ ಕುಮಾರ್ ಅಭಿನಯದ ಮತ್ತೊಂದು ಚಿತ್ರ ‘ರಾಜ್‌ಕುಮಾರ’ ಚಿತ್ರದ ಟೀಸರ್ ಕೂಡಾ ಲೋಕಾರ್ಪಣೆಗೊಳ್ಳುತ್ತಿದೆ.
‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಚಿತ್ರದ ಅಭೂತಪೂರ್ವ ಗೆಲುವಿನ ನಂತರ ಆ ಚಿತ್ರದ ನಿರ್ದೇಶಕ ಸಂತೋಷ್ ಆನಂದ್‌ರಾಮ್ ರಾಮ್ ನಿರ್ದೇಶಿಸಿರುವ ಸಿನಿಮಾ ‘ರಾಜ್‌ಕುಮಾರ’. ಈ ಕಾರಣಕ್ಕೇ ‘ರಾಜ್‌ಕುಮಾರ’ ಚಿತ್ರದ ಬಗ್ಗೆ ಕುತೂಹಲಗಳಿವೆ.
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ಅವರು ನಿರ್ಮಿಸುತ್ತಿರುವ ‘ರಾಜ್‌ಕುಮಾರ‘ ಚಿತ್ರದ ಕುರಿತು ಚಿತ್ರತಂಡ ಈ ವರೆಗೂ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲದ ಕಾರಣ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕೌತುಕ ಸೃಷ್ಟಿಯಾಗಿದೆ. ಸೆಪ್ಟೆಂಬರ್ ೩೦ರಂದು ಬಿಡುಗಡೆಯಾಗಲಿರುವ ಟೀಸರ್ ಮೂಲಕ ಆ  ಕುತೂಹಲ ಮತ್ತಷ್ಟು ಇಮ್ಮಡಿಯಾಗಲಿದೆ ಅನ್ನೋದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರ ಅಭಿಪ್ರಾಯ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed